Anubhavadhadugeya Maadi

ಅನುಭವದಡುಗೆಯ ಮಾಡಿ
ಅನುಭವದಡುಗೆಯ ಮಾಡಿ
ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ

ಅನುಭವದಡುಗೆಯ ಮಾಡಿ
ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ
ಅನುಭವದಡುಗೆಯ ಮಾಡಿ

ತನುವೆಂಬ ಭಾಂಡವ ತೊಳೆದು
ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು
ತನುವೆಂಬ ಭಾಂಡವ ತೊಳೆದು
ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳಿದು
ಅಲ್ಲಿ ಮಿನುಗುವ ತ್ರಿಗುಣದ ಒಲೆಗುಂಡ ನೆಡೆದು

ಅನುಭವದಡುಗೆಯ ಮಾಡಿ
ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ
ಅನುಭವದಡುಗೆಯ ಮಾಡಿ

ವಿರಕ್ತಿಯೆಂಬುವ ಮಡಿಯುಟ್ಟು
ಪೂರ್ಣ ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ವಿರಕ್ತಿಯೆಂಬುವ ಮಡಿಯುಟ್ಟು
ಪೂರ್ಣ ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು
ಮಾಯಾ ಮರೆವೆಂಬ ಕಾಷ್ಟವ ಮುದದಿಂದ ಸುಟ್ಟು

ಅನುಭವದಡುಗೆಯ ಮಾಡಿ
ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ
ಅನುಭವದಡುಗೆಯ ಮಾಡಿ

ಕರುಣಿಂಬ ಸಾಮಗ್ರಿ ಹೂಡಿ
ಮೋಕ್ಷ ಪರಿಕರವಾದಂಥ ಪಾಕವ ಮಾಡಿ
ಕರುಣಿಂಬ ಸಾಮಗ್ರಿ ಹೂಡಿ
ಮೋಕ್ಷ ಪರಿಕರವಾದಂಥ ಪಾಕವ ಮಾಡಿ
ಗುರು ಶರಣರು ಸವಿದಾಡಿ
ನಮ್ಮ ಪುರಂದರವಿಠಲನ ಬಿಡದೆ ಕೊಂಡಾಡಿ

ಅನುಭವದಡುಗೆಯ ಮಾಡಿ
ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ
ಅನುಭವದಡುಗೆಯ ಮಾಡಿ
ಅನುಭವದಡುಗೆಯ ಮಾಡಿ
ಅನುಭವದಡುಗೆಯ ಮಾಡಿ



Credits
Writer(s): L. Krishnan, Purandara Dasa
Lyrics powered by www.musixmatch.com

Link