Hoova Suridenu

ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು
ನೀನು ನನ್ನಲ್ಲೇ ಹೂಂ ಹೂಂ

ಹೂವ ಸುರಿದೇನು ಹೂವ ಸುರಿದೇನು
ಹೂವ ಸುರಿದೇನು ಹೂವ ಸುರಿದೇನು
ನಿನ್ನ ತರಲೆ ತರಲೆಯ ಲೀಲೆಗೆ
ನಿನ್ನ ಚೇಷ್ಟೆ ಮಾತಿನ ಚಾಟಿಗೆ
ಕಣ್ಣು ಕಣ್ಣಿನ ಕಳ್ಳಾಟದ ಪೈಪೋಟಿಗೆ

ಹೂವ ಸುರಿದೇನು ಹೂವ ಸುರಿದೇನು

ನಿಷ್ಕಲ್ಮಶವಾದ ಮನಸಿಗೆ
ಗಂಧ ಹಚ್ಚೆನೂ ಶ್ರೀ ಗಂಧ ಹಚ್ಚೆನೂ
ಮುದ್ದು ಮುಖಿ ನಿನ್ನ ಸಾಂಗತ್ಯಕೆ
ಮಾರು ಹೋದೇನು ಓಡೋಡಿ ಬಂದೇನು
ಜಗದ ಗದ್ಧಲ ಮರೆಸುವಂತ
ನಿನ್ನ ಮೋಹಕವಾದ ಕೊರಳಿಗೆ
ಮೈ ಮನಸಿನ ತಳ್ಳಾಟಡ ಪೈಪೋಟಿಗೆ

ಹೂವ ಸುರಿದೇನು ಹೂವ ಸುರಿದೇನು

ಹೆಜ್ಜೆ ಸಪ್ಪಳವಾಗದೇನೆ ಒಳಗೆ ಇಳಿದೋಳೆ
ಹೊ ಸಲಿಗೆ ಕೊಟ್ಟೋಳೆ
ಆಮಂತ್ರಿಸೋ ಕುಸುಮ ಬಲೆಯೇ
ನಿನ್ನ ಸವಿದೆನು ನಾನೀಗ ಹೆಜ್ಜೇನು
ನನ್ನ ಹೃದಯದ ತೇರಲಿ
ನಿನ್ನಾ ಪ್ರತಿಮೆಯ ಕೂರಿಸಿ
ಹೂವಿನೆಸಳಲಿ ಸಿಂಗರಿಸಿ ಹ್ಮ್ ಹ್ಮ್ ಹ್ಮ್ ಹ್ಮ್

ಹೂವ ಸುರಿದೇನು ಹೂವ ಸುರಿದೇನು
ನಿನ್ನ ತರಲೆ ತರಲೆಯ ತೀಟೆಗೆ
ನಿನ್ನ ಚೇಷ್ಟೆ ಮಾತಿನ ಚಾಳಿಗೆ
ಕಣ್ಣು ಕಣ್ಣಿನ ಕಳ್ಳಾಟದ ಪೈಪೋಟಿಗೆ



Credits
Writer(s): Anoop S J
Lyrics powered by www.musixmatch.com

Link