Geleya Enale

ಗೆಳೆಯ ಎನಲೇ ಇನಿಯ ಎನಲೇ
ಏನೇ ಅನಲಿ ಅದಕು ಮಿಗಿಲೆ
ನಿಂಗೆಲ್ಲಿದೆ ಹೊಂದುವ ಹೋಲಿಕೆ
ನನಗಿಂತಲೂ ನಿನ್ನಲೇ ನಂಬಿಕೆ
ನಿನ್ನೋಳು ನಾ
ನಿನಗಾಗಿ ನಾ
ನಿನಿಂದಲೇ ಎಲ್ಲವು ನೂತನ
ನೀನೆ ಕಣೋ ನನ್ನಯ ಚೇತನ

ಗೆಳೆಯ ಎನಲೇ ಇನಿಯ ಎನಲೇ
ಏನೇ ಅನಲಿ ಅದಕು ಮಿಗಿಲೆ

ನಾ ಖಾಲಿ ಹಾಳೆ
ನೀ ನನ್ನ ಮೇಲೆ
ಚಿತ್ತಾರವ ಗೀಚುವ ಮಾಯಗಾರ
ಯಾವ ಜನ್ಮದ ಪುಣ್ಯವೋ ಕಾಣೆ ನಾನು
ಈ ಜೀವಕೆ ಪರಿಚಯ ಆದೆ ನೀನು
ನಾ ಪೂಜಿಸೋ ದೇವತೆ ನೀನೆ ಇನ್ನು

ಗೆಳತಿ ಎನಲೇ, ಒಡತಿ ಎನಲೇ
ಏನೇ ಅನಲಿ ಅದಕು ಮಿಗಿಲೆ

ನೀ ನನ್ನ ಸ್ವಂತ ಎನುವಂತ ಸ್ವಾರ್ಥ
ಸಂತೋಷವ ನೀಡಿದೆ ಭಾರಿ ಭಾರಿ
ಜನರಿದ್ದಾರೂ ಸುತ್ತಲೂ ಕೋಟಿ ಕೋಟಿ
ನೀನಿಲ್ಲದೆ ಹೋದರೆ ನಾನು ಒಂಟಿ
ಪ್ರತಿ ನಿತ್ಯವು ಆಗಲಿ ನಮ್ಮ ಭೇಟಿ

ಗೆಳತಿ ಎನಲೇ, ಒಡತಿ ಎನಲೇ
ಏನೇ ಅನಲಿ ಅದಕು ಮಿಗಿಲೆ
ನಿಂಗೆಲ್ಲಿದೆ ಹೊಂದುವ ಹೋಲಿಕೆ
ನನಗಿಂತಲೂ ನಿನ್ನಲೇ ನಂಬಿಕೆ
ನಿನ್ನೋಳು ನಾ
ನಿಂಗಾಗಿ ನಾ
ನಿನಿಂದಲೇ ಎಲ್ಲವು ನೂತನ
ನೀನೆ ಕಣೋ ನನ್ನಯ ಚೇತನ



Credits
Writer(s): Kaviraj, Veer Samarth
Lyrics powered by www.musixmatch.com

Link