Gunu Gunuguva

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ

ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವಾ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ

ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ
ಹಿತವಾಗಿದೆ ನನಗೀ ಜೀವನ
ಹೇಗಾದರೂ ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೋ ಎಳೆದೊಯ್ಯೋ ಗಾಳ ಹಾಗೆ
ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಅಸೆ ನಂಗೆ
ಅದು ಯಾಕೋ ಅದು ಯಾಕೋ ಅದು ಯಾಕೋ

ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ
ಎಲ್ಲವ ಬಿಡಬಲ್ಲೆ ಇನ್ನು ನಾನು
ನಿನಗಾಗಿ ನಿನಗಾಗಿ

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ



Credits
Writer(s): Kaviraj, Charan Raj
Lyrics powered by www.musixmatch.com

Link