Marete Hodenu (Unplugged)

ಮರತೆ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು
ತಪ್ಪು ನಿನ್ನದೇ
ಬಿದ್ದರೆ ನಿನ್ನದೇ ತೋಳಿನಲಿ
ಗಂಧದ ಹೂವಿಗೂ
ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ
ಆಹಾ

ನಿನ್ನಯ ಕೈಯಲ್ಲಿ
ಪ್ರೀತಿಯ ಪುಸ್ತಕ
ಆಗುವ ಹಂಬಲ ನನಗೀಗ
ಹೇಳಲುಬಾರದ
ಹೇಳಿಯೂ ತೀರದ
ತರಬೇತಿ ಇರದಂತಹ ದಾಹ
ಆಹಾ

ಸನಿಹ ಬಂದರು
ಗೆರೆಯ ದಾಟದೆ
ದೂರವೇ ನಿಲ್ಲುವೆ ನಿರುಪಾಯ
ನಲ್ಮೆಯ ಜೀವವೇ
ನೆಮ್ಮದಿ ಕೋರುವೆ
ಎದೆಯಲ್ಲೇ ಬಚ್ಚಿಟ್ಟು ಗಾಯಾ
ಆಹಾ

ಮರತೆ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು
ತಪ್ಪು ನಿನ್ನದೇ
ಬಿದ್ದರೆ ನಿನ್ನದೇ ತೋಳಿನಲಿ
ಗಂಧದ ಹೂವಿಗೂ
ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ
ಆಹಾ



Credits
Writer(s): Purandara Dasaru, J. Anoop Seelin
Lyrics powered by www.musixmatch.com

Link