Badukina Bannave

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ

ಗಾಳಿಯಲಿ
ಬೆಚ್ಚನೆ ಅಲೆಯಿದೆ
ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
ನಕ್ಷೆಯ ನೀಡದೆ

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ

ತಲುಪದ ಕರೆ ನೂರಾರಿವೆ
ಬೆರಳಲೇ ಇದೆ ಸಂಭಾಷಣೆ
ಕನಸಿಗೂ ಸಹ ಕಂದಾಯವೇ
ವಿರಹವೇ ಕಿರು ಸಂಭಾವನೆ

ಕಳೆದರೆ ನೀನು
ಉಳಿವೆನೇ ನಾನು
ನೆಪವಿರದೆ ನಿನ್ನ
ಅಪಹರಿಸಿ ತಂದೆ
ಉಪಕರಿಸು ಶಿಕ್ಷೆಯ ನೀಡದೆ

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ

ಸಾಸಾಸಾ ಗಗಸಾನಿಸ ಗಗಗಸಾನಿಸ
ಪನಿಸಾನಿಸ ಗಸ ಸಗಮಪ ಗಮಪಾನಿ
ಪಮಾನಿಗ



Credits
Writer(s): Jayanth Kaikini, Charan Raj
Lyrics powered by www.musixmatch.com

Link