O Meghave Meghave

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ

ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ ಓದುವೆಯಾ?
ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ ಓದುವೆಯಾ?
ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ?
ಇದು ಓದೋ ಓಲೆಯಲ್ಲ ಬರೆದುಕೋ
ನನ್ನ ಜೀವ ನಿನದೇ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಈ ಕಂಗಳಾ ಮುಂಬಾಗಿಲಾ
ಬಾ ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ

ಮುಗಿಲೇ ಬೆಳ್ಳ್ಮುಗಿಲೆ ತಂಪೆಲರೆ ತಳಿರೇ
ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೇ
ವನವೆ ಕಾನನವೆ ಹೂ ಬನವೆ ಹಸಿರೇ
ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೇ
ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ
ಈ ಕಂಗಳಾ ಮುಂಬಾಗಿಲಾ
ನಾ ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ
ಈ ಕಂಗಳಾ ಮುಂಬಾಗಿಲಾ
ನಾ ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪತ್ರಕೆ ವಂದನೆ



Credits
Writer(s): Hamsalekha
Lyrics powered by www.musixmatch.com

Link