Thangaali

ತಂಗಾಳಿಯಲಿಂದು ಬಂದಿದೆ ಹೊಸ sound'u
ಏರಿ ಕುಳಿತೆ ಒಲವ ಉಯ್ಯಾಲೆಯನು
ಭಾವನೆಗಳ ಹಿಂಡು ಬಾರಿಸುತಿದೆ band'u
ಹೇಳಿಕೊಂಡೆ ನನಗೇ ಸುವಾಲಿಯನು
ಹೃದಯದ ಮನೆಯ ಅಂಗಳದಲ್ಲಿ ನಿಂತಿದೆ ನಲುಮೆ ನಾಚಿಕೆಯಲ್ಲಿ
ಎದೆಬಾಗಿಲ bell ಒತ್ತಿದೆ ಮೃದು ಮಲ್ಲಿಗೆ ಹೂವೊಂದು

ತಂಗಾಳಿಯಲಿಂದು ಬಂದಿದೆ ಹೊಸ sound'u
ಏರಿ ಕುಳಿತೆ ಒಲವ ಉಯ್ಯಾಲೆಯನು

ಪಮ್, ಪಮ್, ಪಮ್, ಪಮ್
ಪಮ್-ಪಮ್-ಪಮ್-ಪಮ್-ಪಮ್, ಪಮ್
ಪಮ್, ಪಮ್, ಪಮ್, ಪಮ್
ಪಮ್-ಪಮ್-ಪಮ್-ಪಮ್-ಪಮ್, ಪಮ್

ಪಮ್, ಪಮ್, ಪಮ್, ಪಮ್
ಪಮ್-ಪಮ್-ಪಮ್-ಪಮ್-ಪಮ್, ಪಮ್
ಪಮ್, ಪಮ್, ಪಮ್, ಪಮ್
ಪಮ್-ಪಮ್-ಪಮ್-ಪಮ್-ಪಮ್, ಪಮ್

ಮನಸಲಿ ಮಂದಿಗೆಯ ಕದ್ದು ತಿಂದಿರುವೆ
ಕಂಡುಹಿಡಿಯುವಳೇ ಹುಡುಗಿ ಸಿಕ್ಕರೆ ಎದುರಲ್ಲಿ?
ಕಚಗುಳಿ ಇಟ್ಟಂತೆ ಕಿಲ -ಕಿಲ ಎನ್ನುವುದು
ಏತಕೆ ಬದಮಾಷು ಹೃದಯ? ಉತ್ತರ ಸಿಗದಿಲ್ಲಿ
ನಸುನಗುವುದು ನನಗಂತು ಅತೀ ಅಂದರೆ ಅತೀ ಹೊಸತು
ನಾನ್ ಈ ಥರ ಯಾಕಾಗಿರುವೆ?

ಕಲಿತಿದೆ ಮೈ ಅದರುವುದನ್ನು, ಹುಡುಗಿಯ ಮುಂದೆ ಹೆದರುವುದನ್ನು
ಕೊಬ್ಬೆಲ್ಲವು ಮಬ್ಬಾಗಿದೆ, ಏನಾಗಿದೆ ನನಗಿಂದು?

ತಂಗಾಳಿಯಲಿಂದು ಬಂದಿದೆ ಹೊಸ sound'u
ಏರಿ ಕುಳಿತೆ ಒಲವ ಉಯ್ಯಾಲೆಯನು

ಅನಿಸಿಕೆಗಳನೆಲ್ಲ ಎಣಿಸಿ ಹೇಳಿದರೂ
ಹೇಳಲೇ ಬೇಕಾದ ವಿಷಯ ಮರೆತೇ ಹೋಗುವುದು
ನನ್ನದು ನೇರ ನುಡಿ, ಒಂಥರ ಖಾರ ಪುಡಿ
ಆದರೂ ನನ ಮಾತೇ ನನಗೆ ಕವಿತೆ ಎನಿಸುವುದು
ನೆನಪೆಂಬುವ ನವಿಲುಗರಿ ಕಸ ಗುಡಿಸಿದೆ ಮನಸಿನಲಿ
ಎದೆಬೀದಿಯು clean ಆಗಿಹುದು

ಚಂದದ ಹೃದಯ ನನ್ಗಿದೆ ಎಂದು ಖಂಡಿತವಾಗಿ ತಿಳಿಯಿತು ಇಂದು
ಕೈ ಎತ್ತುತ ನಾ ಹೇಳುವೆ ಒಲವಾಗಿದೆ ನನಗಿಂದು

ತಂಗಾಳಿಯಲಿಂದು ಬಂದಿದೆ ಹೊಸ sound'u
ಏರಿ ಕುಳಿತೆ ಒಲವ ಉಯ್ಯಾಲೆಯನು



Credits
Writer(s): Yogaraj R Bhatt, B Ajaneesh Lokanath
Lyrics powered by www.musixmatch.com

Link