Ninna Nenape (From "Siddhartha")

ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ
ನಿನ್ನ ಹೆಸರೇ ನನ್ನ ದಿನಚರಿ ಪುಟ ತುಂಬ
ಅದು ಮನಸಿನ ಪ್ರತಿಬಿಂಬ
ಅಗಲಿ ನಿನ್ನ ಉಳಿವೆ ಹೀಗೆ
ಅದೆ ನೋಡು ಆಶ್ಚರ್ಯ

ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ

ನಾನು ಗುನುಗೋ ಹಾಡಿನಲ್ಲಿ ಬಂತು ನೋಡು ನಿಂದೇ ಸಾಲು
ಖಾಸಾ ನನ್ನ ಆಸೆಯಲ್ಲಿ ಎಂದಿಗೂ ನೀನೇ ಶಾಮೀಲು
ಸಂಗೀತ ಮಂಕಾಯಿತು ಸಂಗಾತಿ ನೀನಿಲ್ಲದೆ
ಗಾಳಿಯು ಬೀಸದು ನೀನು ಬರದೇ
ಆದರೂನು ನಗುವೇ ನಾನು
ಅದೆ ನೋಡು ಆಶ್ಚರ್ಯ

ನಿನ್ನ ನೆನಪೇ, ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ

ಹೋದಲ್ಲೆಲ್ಲಾ ನನ್ನ ಪಕ್ಕ ಖಾಲಿ ಖಾಲಿ ನಿನ್ನ ಜಾಗ
ಅಪ್ಪಿ ತಪ್ಪಿ ಸಿಕ್ಕಬಹುದು ಎನ್ನುವ ಆಸೆ ಆಗಾಗ
ನನ್ನನು ಕಾಪಾಡುವ ರಹಸ್ಯ ನೀನಲ್ಲವೇ
ಸುಳ್ಳೇ ನೀ ಸಿಕ್ಕರೂ ನಂಬಿಬಿಡುವೆ
ದೂರವಿದ್ದು ಸನಿಹ ಬಂದೆ
ಅದೆ ನೋಡು ಆಶ್ಚರ್ಯ

ನಿನ್ನ ನೆನಪೇ
ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ



Credits
Writer(s): Jayanth Kaikini, V Harikrishna
Lyrics powered by www.musixmatch.com

Link