Manase O Manase

ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಒಳ ಮನಸೇ
ಮನಸೇ ನಿನ್ನಲಿ ಯಾವ ಮನಸಿದೆ
ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸ್ಸಿಲ್ಲದ ಮನಸ್ಸಿನಿಂದ ಮನಸು ಮಾಡಿ ಮಧುರ ಮನಸಿಗೆ
ಮನಸು ಕೊಟ್ಟು ಮನಸ್ಸನ್ನೇ ಮರೆತುಬಿಟ್ಟೆಯ
ಮನಸು ಕೊಟ್ಟು ಮನಸೊಳಗೆ ಕುಳಿತುಬಿಟ್ಟೆಯ
ಮನಸೇ ಓ ಮನಸೇ ಎಂಥಾ ಮನಸೆ ಮನಸೆ ಎಳೆ ಮನಸೆ

ಓ ಮನಸೇ, ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ
ಓ ಮನಸೇ, ಎರಡು ಹಾಲು ಮನಸಲೊಂದೇ ಮನಸು ಇದ್ದರೆ ಪ್ರೇಮ
ಮನಸಾಗೋ ಪ್ರತಿ ಮನಸಿಗೂ ಮನಸೋತಿರುವ
ಎಳೆ ಮನಸು ಎಲ್ಲ ಮನಸಿನ ಮನಸೇರೋಲ್ಲ
ಕೆಲ ಮನಸು ನಿಜ ಮನಸಿನಾಳದ ಮನಸಾ
ಹುಸಿ ಮನಸು ಅಂತ ಮನಸ್ಸನ್ನೆ ಮನಸೆನ್ನೋಲ್ಲ
ಮನಸೇ ಮನಸೇ ಹಸಿ ಹಸಿ ಮನಸೆ
ಮನಸು ಒಂದು ಮನಸಿರೋ
ಮನಸಿನ (ತನನನ)

ತಿರುಗೋ ಮನಸಿಗೂ ಮರುಗೋ ಮನಸಿದೆ
ಬರದ ಮನಸಿಗೂ ಕರಗೋ ಮನಸಿದೆ
ಮೈ ಮನಸಲಿ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ ಹೇ
ಮುಮ್ಮಲ ಮನಸಿದ್ದರು ಮುಳುಗೇಳದು ಮನಸು
ಮನಸೆಲ್ಲೋ ಮನಸು ಮಾಡೋ ಮನಸಾ ಮನಸು

ಮನಸೇ ಓ ಮನಸೇ

ಓ ಮನಸೇ, ಮನಸು ಮನಸಲಿದ್ದರೇನೆ ಅಲ್ಲಿ ಮನಶ್ಶಾಂತಿ
ಓ ಮನಸೇ, ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸ್ಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು
ಮನಸೂರೆ ಆಗೋದು ಮನಸಿಗೂ ಗೊತ್ತು
ಮನಸಿದ್ದರೆ ಮಾರ್ಗ ಅಂತ ಹೇಳುವ ಮನಸು
ಮನ್ನಿಸುವ ಮನಸಲ್ಲಿ ಮನಸಿಡೋ ಹೊತ್ತು
ಮನಸೇ ಮನಸೇ ಬಿಸಿ ಬಿಸಿ ಮನಸೇ
ಮನಸು ಒಂದು ಮನಸಿರೋ
ಮನಸಿನ (ಧಿರನನ)
ತುಮುಲ ಮನಸಿಗೂ ಕೋಮಲ ಮನಸಿದೆ
ತೊದಲು ಮನಸಿಗೂ ಮೃದುಲ ಮನಸಿದೆ
ಮನಸಿಚ್ಚೆ ಮನಸ ಒಳಗೆ ಮನಸ್ವೇಚ್ಚೆ ಮನಸ ಹೊರಗೆ ಹೇ
ಮನಸ್ಪೂರ್ತಿ ಮನಸ ಪೂರ್ತಿ ಇರುವುದೇ ಮನಸು
ಮನಸೆಲ್ಲೋ ಮನಸು ಮಾಡೊ ಮನಸಾ ಮನಸು

ಮನಸೇ ಓ ಮನಸೇ
ಮನಸೇ ಎಳೆ ಮನಸೇ
ಮನಸೇ ಒಳ ಮನಸೇ



Credits
Writer(s): Sandeep Chowta, V. Nagendra Prasad
Lyrics powered by www.musixmatch.com

Link