Aralo Hunnime

ಅರುಳೋ ಹುಣ್ಣಿಮೆ ಹರಳೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ
ಅರುಳೋ ಹುಣ್ಣಿಮೆ ಹರಳೋ ಹುಣ್ಣಿಮೆ
ನೀ ಕನಸು ಕೀರಿ ಹಾಡೋ ಹುಣ್ಣಿಮೆ
ಯವ್ವನಾ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೂನ್ನೆ ಹುಣ್ಣಿಮೆ

ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ

ಈ ಕಣ್ಣಿಗೆ ಸರಿದೂಗೋ ಕಣ್ಣುಗಳಿಲ್ಲ
ಈ ಹೊಳಪಿಗೆ ಸರಿದೂಗೋ ಬೆಳಕುಗಳಿಲ್ಲ
ನಿನ್ನ ಕಾಂತಿ ಪ್ರಕೃತಿಗೆ ಮೈ ಕಾಂತಿ

ಈ ನಗುವ ಕಲೆ ಹಾಕೋ ಕೈಗಳು ಇಲ್ಲ
ವಯ್ಯಾರಕೆ ತಲೆ ಹಾಕೋ ನಾಲಿಗೆಯಿಲ್ಲ
ನಿನ್ನ ಸೊಗಸೆ ಈ ಬೊಗಸಿಗೆ ಮನಶಾಂತಿ
ನಿನ್ನ ಭಂಗಿಯ
ಪ್ರಫುಲ್ಲ ಲಲ್ಲೆಯ
ತಾಕೋದೇ ಸಾಹಿತ್ಯ
ತೂಗೋದೇ ಸಂಗೀತ

ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ

ಈ ಹೊನಪನು ಮರೆಮಾಚೋ ರೇಷಿಮೆಯಿಲ್ಲ
ಈ ತಂಪನು ತುಸು ಮಾಸುವ ಮಾಸಗಳಿಲ್ಲ
ನಿನ್ನ ಸ್ಪರ್ಶ ಹೂಗಳಲಿ ಮೃದುವಾಸ

ಈ ನಡಿಗೆಯ ಕದಲಿಸೋ ನರ್ತನವಿಲ್ಲ
ಈ ಸ್ಪೂರ್ತಿಯ ಬದಲಿಸೋ ಶಕ್ತಿಗಳಿಲ್ಲ
ನಿನ್ನ ಇರುವಿಕೆ ಹೆಣ್ಣ್ಗಳಿಗೆ ಉಪವಾಸ
ಸುಮ್ಮನೇತಕೆ
ಸುಳ್ಳು ಹೋಲಿಕೆ
ನೀನಿರುವ ಸುಳ್ಳಲ್ಲು
ನಾನೀರುವೆ ನಿಜವಾಗಲು

ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ
ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ
ನೀ ಕನಸು ಕೀರಿ ಹಾಡೋ ಹುಣ್ಣಿಮೆ
ಯವ್ವನಾ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೂನ್ನೆ ಹುಣ್ಣಿಮೆ



Credits
Writer(s): K. Kalyan
Lyrics powered by www.musixmatch.com

Link