Bayasade Bali Bande

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ
ಉರಿ ಬಿಸಿಲು ತಂಪಾಯ್ತು ನಿನ್ನ ನಾ ನೋಡಲು
ಮೈ ಏಕೋ ಬಿಸಿಯಾಯ್ತು ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲಿ ಕಲ್ಲು ಮೃದುವಾಯಿತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೇ ನೀರಾಗಿ ನಾ ಕರಗಿಹೋದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರಗಾದೆ
ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು
ಲಾ ಲಲ ಲಾ ಅಹಹಹ
ಲಾ ಲಲ ಲಾ ಲ ಲ ಲಾ
ಲಲಲಲಲಾ ಲಲ್ಲಲಲಲಾ ಲಲ್ಲಲಲಲಾ ಲಲ್ಲಲಲ್ಲ
ನಿನ್ನಿಂದ ಆನಂದ ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು ಇನ್ನು ಎಂದೆಂದೂ ಬಿಡೆನು
ಸವಿಯಾದ ಮಾತಿಂದ ಹೊಸ ಬಾಳು ತಂದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ



Credits
Writer(s): Chi Udayashanker, Rajan, Nagendra
Lyrics powered by www.musixmatch.com

Link