Nagisalu Neenu

ನಗಿಸಲು ನೀನು ನಗುವೆನು ನಾನು
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನಾ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ

ವೀಣೆಯು ನಾನು ವೈಣಿಕ ನೀನು
ತಂತಿಯು ಮೀಟದೆ ನುಡಿಸುವುದೇನು
ಆ... ಆ... ಆಆ... ಆಆ...
ವೀಣೆಯು ನಾನು ವೈಣಿಕ ನೀನು
ತಂತಿಯು ಮೀಟದೆ ನುಡಿಸುವುದೇನು
ಬಯಸಿದ ರಾಗ ನುಡಿಸಿ ನೀ ನಲಿದಾಗ
ನನಗೂ ಆನಂದ ನಿನ್ನಿಂದ
ನುಡಿಸಲು ನೀನು ನುಡಿವೆನು ನಾನು
ನುಡಿಸಲು ನೀನು ನುಡಿವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಗಿಸಲು ನೀನು ನಗುವೆನು ನಾನು
ನಿನ್ನಾ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು

ನಾನೊಂದು ಬೊಂಬೆಯೂ ನೀ ಸೂತ್ರಧಾರಿ

ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನಾ ತಾಳಕೆ ನನ್ನ
ನಂ ತ ನಂ ತಮ್ ತ ನಂ ತ ನಂ ತಮ್ ತ
ನಂ ತ ನಂ ತಮ್ ತ
ನಂ ತ ನಂ ತ ತನನನನ ತನನನನ
ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನಾ ತಾಳಕೆ ನನ್ನ
ಕೈಹಿಡಿದೆನ್ನ ನಡೆಸು ಕರುಣಿಸು ಹರಸು
ನನ್ನಾ ಸೇವೆ ಸ್ವೀಕರಿಸು
ನಡೆಸಲು ನೀನು ನಡೆವೆನು ನಾನು
ನಡೆಸಲು ನೀನು ನಡೆವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಗಿಸಲು ನೀನು ನಗುವೆನು ನಾನು
ನಿನ್ನಾ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ



Credits
Writer(s): Chi Udayashanker, Rajan, Nagendra
Lyrics powered by www.musixmatch.com

Link