Devaloka Premaloka (From "Midida Hrudayagalu")

ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
ಇಲ್ಲಿ ನಾನು ನನ್ನ ಗಂಡ ನನ್ನ ಮಗೂವೇ
ಪ್ರತೀ ರಾತ್ರೀ ಪ್ರತೀ ಹಗಲು ಬರೀ ನಗುವೆ

ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
ಇಲ್ಲಿ ನಾನು ನನ್ನ ಹೆಂಡತೀ ನನ್ನ ಮಗೂವೇ
ಪ್ರತೀ ರಾತ್ರೀ ಪ್ರತೀ ಹಗಲು ಬರೀ ನಗುವೆ

ಕನಸಿನ ಮಾಲೆ ಕಟ್ಟಿದ ಮೇಲೆ ನನಸು ಮಾಡಿದೆ
ಮನಸು ನೀಡಿದೆ ಹೃದಯ ಮಿಡಿಸಿದೆ

ಬಡತನ ನಾನು ಹೊಸತನ ನೀನು
ನನ್ನ ವರಿಸಿದೆ, ಜೀವ ಬೆರೆಸಿದೆ
ನೋವ ಮರೆಸಿದೆ

ಕಾವೇರಿ ನನಗಕ್ಕ ನಾ ಕಪೀಲ
ನಿನ್ನಿಂದ ಪಡಕೊಂಡೆ ನಾ ಸಕಲ
ಈ ಜನುಮದಲಿ ಮರುಜನುಮದಲಿ
ನನ್ನಅಳುವ ಪತಿ ನೀನೆ
(ಓಯ್ ಕಾವೇರಮ್ಮ ಯಾವ್ ಲೋಕದಲ್ಲಿದ್ದೀಯಾ)

ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
ಇಲ್ಲಿ ನಾನು ನನ್ನ ಗಂಡ ನನ್ನ ಮಗುವೇ
ಪ್ರತೀ ರಾತ್ರೀ ಪ್ರತೀ ಹಗಲೂ ಬರೀ ನಗುವೇ

ವರುಷಗಳೆಲ್ಲ ನಿಮಿಷಗಳಂತೆ ಉರುಳಿ ಹೋದವು
ನಿನ್ನ ಜೊತೆಯಲಿ ಪ್ರೇಮ ಕಥೆಯಲ್ಲಿ
ಬಯಕೆ ಗಳೆಲ್ಲ ಹೊಸ ಚಿಗುರಂತೆ ಮರಳಿ ಬಂದವು
ನಿನ್ನ ನಗುವಲ್ಲಿ ಪ್ರೇಮ ವನದಲಿ
ಇಲ್ಲಿ ಕೋಪ ಪರಿತಾಪ ಅಪರೂಪ
ಅತೀ ಸರಳ ಅತೀ ವಿರಳಾ ನಿನ್ನ ರೂಪ
ಈ ಜನುಮದಲಿ ಮರು ಜನುಮದಲಿ
ನನ್ನಅಳುವ ದೊರೆ ನೀನೆ

(ಅಮ್ಮ ಯಾವ್ ಲೋಕದಲ್ಲಿದ್ದೀಯಾ)

ದೇವಲೋಕ ಪ್ರೇಮಲೋಕ ನನ್ನಾ ಮನೇಯೀಗ
ಇಲ್ಲಿ ನಾನು ನನ್ನ ಗಂಡ ನನ್ನ ಮಗೂವೇ
ಪ್ರತೀ ರಾತ್ರೀ ಪ್ರತೀ ಹಗಲೂ ಬರೀ ನಗುವೆ

ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
ಇಲ್ಲಿ ನಾನು ನನ್ನ ಹೆಂಡತೀ ನನ್ನ ಮಗೂವೇ
ಪ್ರತೀ ರಾತ್ರೀ ಪ್ರತೀ ಹಗಲೂ ಬರೀ ನಗುವೆ



Credits
Writer(s): Hamsalekha
Lyrics powered by www.musixmatch.com

Link