Prema Peeditha (From "Enendu Hesaridali")

ಹೇಗೋ ಇದ್ದೇನು ಏನೋ ನನ್ನ ಪಾಡಿಗೆ
ಓಡಿ ಬಂದೇನು ನಿನ್ನ ಮನದ ಬಾಗಿಲಿಗೆ
ನೀನು ತುಂಬಿದೆ ನನ್ನ ಕಾಲಿ ಜೋಳಿಗೆ
ಮೂಕಳಾದೇನು ನಿನ್ನ ಮಧುರ ಕಾಳಜಿಗೆ

ನಿನಗಾಗಿ ಹಂಬಲಿಸಿ ಹಗುರಾಗಿ ಈ ಮನ
ರಮಣೀಯವಾಗುತಿದೆ ಬೇಸರ
ಜೊತೆಯಲ್ಲಿ ನೀನಿರಲು, ಹೊಸದಾಗಿ ಜೀವನ
ಕನಸೀಗ ಮೂಡುತಿವೆ ಸಾವಿರ

(ಸಹಜವಾಗಿ ಸನಿಹ ಬಂದೇನು ನಿನ್ನ ನೋಡುತಾ
ಮಧುರವಾಗುತಾ ಹೃದಯ ಬೀಗಲೇ ಪ್ರೇಮ ಪೀಡಿತಾ
ಸಹಜವಾಗಿ ಸನಿಹ ಬಂದೇನು ನಿನ್ನ ನೋಡುತಾ
ಮಧುರವಾಗುತಾ ಹೃದಯ ಬೀಗಲೇ ಪ್ರೇಮ ಪೀಡಿತಾ)

ಸದ್ದಿಲದೇ ನೀ ಹಾದು ಹೋದಾಗಲೂ
ಹೆಜ್ಜೆ ಮೂಡುವುದು ನನ್ನಲಿ

ಮಾತಿಲ್ಲದೆ ಈ ಜೀವ ತಾನಾಗಿಯೇ
ನಿನ್ನದಾಯಿತು ಏ ನಿನ್ನಲಿ

ಮಂದಾಹಸವೇ ಬಂತು ಬಾಳಿನ ಭಾವಚೈತ್ರಕೆ
ಉಕ್ಕಿಬಂದಿದೆ ಮುತ್ತು ನಿನ್ನನು ಕಂಡ ಮಾತ್ರಕೆ
ಮೆಚ್ಚಿಕೊಂಡೇನು ಸರಳ ಸುಂದರ ನಿನ್ನಾ ವರ್ತನೆ
ಎಲ್ಲಾ ಹೇಳಿಯು ಹೇಳಲಾಗದ ಮುಕವೇದನೆ

ಬೇರೆತೋಗುತಾ ಉಸಿರಲಿ ನಿಂತೇ ಆವರಿಸಿ ಕುಂಗಿನಂತೆ ಕಾಡುತಾ

(ಸಹಜವಾಗಿ ಸನಿಹ ಬಂದೇನು ನಿನ್ನ ನೋಡುತಾ
ಮದುರವಾಗುತಾ ಹೃದಯ ಬೀಗಲೇ ಪ್ರೇಮ ಪೀಡಿತಾ)

ನಿನ್ನೊಂದಿಗೆ ಇದ್ದಾಗ ನಾನಾಗುವೆ
ಒಂದು ಸ್ವಪ್ನಗಳಾ ಸಂಗ್ರಹಾ

ಮಾತಾಡುವಾ ಮುಂಚೆನೇ ಇಡೇರಿದೆ ಸಾದಾ ಆಸೆಗಳಾ ಬಿನ್ನಹ

ಮಾನವೀಯತೆ ಇಂದ ತುಂಬಿದೆ ನಿನ್ನಾ ವೈಕರಿ
ಚುರು ಆಚೆಗೆ ನೀನು ಹೋದರು ಸಣ್ಣಾ ಗಾಬರಿ
ಪ್ರೀತಿಯಿಂದಲೇ ಕಣ್ಣು ತುಂಬಿದೆ ಲೋಕ ಚೆಂದವು
ಬಣ್ಣ ಬಣ್ಣದ ಹಕ್ಕಿ ನಮ್ಮೆಡೆ ಹಾರಿ ಬಂದವು

ನಡೆಯಬೇಕಿದೆ ಬೆಳಕನೇ ಕೈಲಿ ಕೈ ಹಿಡಿದು ಹಂಚಿಕೊಂಡು ಹಾರುತಾ

(ಸಹಜವಾಗಿ ಸನಿಹ ಬಂದೇನು ನಿನ್ನ ನೋಡುತಾ
ಮದುರವಾಗುತಾ ಹೃದಯ ಬೀಗಲೇ ಪ್ರೇಮ ಪೀಡಿತಾ
ಸಹಜವಾಗಿ ಸನಿಹ ಬಂದೇನು ನಿನ್ನ ನೋಡುತಾ
ಮದುರವಾಗುತಾ ಹೃದಯ ಬೀಗಲೇ ಪ್ರೇಮ ಪೀಡಿತಾ)



Credits
Writer(s): Jayanth Kaikini, Surendra Nath B R
Lyrics powered by www.musixmatch.com

Link