Karpoorada Gombeyali (From "Karpoorada Gombe")

ಓ... ಕರ್ಪೂರದ ಗೊಂಬೆ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ
ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ

ನುಡಿದರೂ ಹಾ ಹಾ
ನಡೆದರೂ ಹಾ ಹಾ
ಕರೆದರೂ ಹಾ ಹಾ
ಬೆರೆತರೂ ಹಾ
ಅಂತರಂಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ

#INSTRUMENTAL
ಎಲ್ಲಿಯ ಮಾಮರ
ಎಲ್ಲಿಯ ಇಂಚರ
ಬಂತು ಒಂದು ಕೋಗಿಲೆ ರಾಗವಿರದ ಹಾಡಿಗೆ
ಎಲ್ಲಿಯ ಅಕ್ಷರ
ಎಲ್ಲಿಯ ಸುಸ್ವರ
ಹಾಡಬಲ್ಲ ಕೋಗಿಲೆ ಮೂಕವಾಯ್ತು ಪ್ರೀತಿಗೆ

ಕರೆದರೂ ಹಾ ಹಾ
ಬೆರೆತರೂ ಹಾ
ನುಡಿದರೂ ಹಾ ಹಾ
ನಡೆದರೂ ಹಾ ಹಾ
ಅಂತರಂಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ

ಕರ್ಪೂರದ ಗೊಂಬೆಗೆ
ಮುತ್ತಿನ ಆರತಿ
ಪ್ರಥಮ ನಯನ ಸಂಗಮ ಮರೆಯಲಾಗದಾಗಿದೆ
ಪ್ರೇಮದ ದೈವಕೆ
ಅಂದದ ಅರ್ಪಣೆ
ಹೃದಯ ಹಾಡೋ ಸಂಭ್ರಮ ಬರೆಯಲಾಗದಾಗಿದೆ
ನುಡಿದರೂ ಹಾ ಹಾ
ನಡೆದರೂ ಹಾ ಹಾ
ಕರೆದರೂ ಹಾ ಹಾ
ಬೆರೆತರೂ ಹಾ
ಅಂತರಂಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ



Credits
Writer(s): Hamsalekha
Lyrics powered by www.musixmatch.com

Link