Nee Nanna Loka (From "Sarvasva")

ನಿನ್ನೆ ಬಯಸಿರಲು ಬಯಸಲಿ ಇನ್ನೇನು
ನೀನೇ ಮಳೆಬಿಲ್ಲು ಬಣ್ಣದ ಹಂಗೇನು
ಉಸಿರಿರೋ ತನಕ ಜೊತೆಯಿರೋ ತವಕ
ನೀನೇ, ನೀನೇ, ನೀನೇ
ನೀನೇ ನನ್ನ ಲೋಕ

ಮಗುವಂತೆ ನಿನ್ನ ಮಡಿಲಲ್ಲಿ ಮಲಗಿ ಕನಸನ್ನು ಕಣೋ ಸುಖವೊಂದು ಸಾಕು
ಮೆಲುವಾಗಿ ನಿನ್ನ ಬೆರಳನ್ನು ಹಿಡಿದು ಬಲುದೂರ ಸಾಗೋ ಹಿತವೊಂದು ಬೇಕು
ನಿನ್ನಿಂದ ನಾನು ಆದಂತೆ ಪೂರ್ಣ ನಿನ ಮುಂದೆ ಬೇರೆ ಎಲ್ಲಾನೂ ಗೌಣ
ನೀನೇ, ನನ್ನ ಲೋಕ

ಬಡಪಾಯಿಗೊಂದು ಬಹುಮಾನ ನೀನು, ಜೋಪಾನ ಮಾಡಿ ಕಾಪಾಡಬೇಕು
ತೊಳಲ್ಲಿ ತಬ್ಬಿ ನಿಂತಾಗ ನಿನ್ನ ಶತಮನವೊಂದು ಸರಿದೂಗಬೇಕು
ನನಗೊಂದು ಹೃದಯ ಇದೆ ಅನ್ನೋ ವಿಷಯ ಅರಿವಾಯ್ತು ನನಗೆ ನೀ ಬಂದ ಮೇಲೆ
ನೀನೇ, ನನ್ನ ಲೋಕ

ನಿನ್ನೆ ಬಯಸಿರಲು ಬಯಸಲಿ ಇನ್ನೇನು
ನೀನೇ ಮಳೆಬಿಲ್ಲು ಬಣ್ಣದ ಹಂಗೇನು
ಉಸಿರಿರೋ ತನಕ ಜೊತೆಯಿರೋ ತವಕ
ನೀನೇ ನೀನೇ ನೀನೇ
ನೀನೇ ನನ್ನ ಲೋಕ



Credits
Writer(s): Sridhar V Sambhram, Kavi Raj
Lyrics powered by www.musixmatch.com

Link