Dhruvataare (From "Pailwaan")

ಧ್ರುವತಾರೆ! ಧ್ರುವತಾರೆ! ಸಾವಿರಾರು ಧ್ರುವತಾರೆ!
ಭೂಮಿ ಮೇಲೂ ಇರುತಾರೆ
ಮಿಂಚಲು ಆಗದೇ ನೋಂದಿರೋ
ಧ್ರುವತಾರೆ! (ಧ್ರುವತಾರೆ)
ಧ್ರುವತಾರೆ! (ಧ್ರುವತಾರೆ)

ಕಾಲದ ಚಕ್ರದ ಅಡಿಯಲಿ
ಸಿಗುತಾರೆ (ಸಿಗುತಾರೆ)
ಸಿಗುತಾರೆ (ಸಿಗುತಾರೆ)
ಯಾತಕೋ ಕಾಣೆ ಈ ಉಡುಗೊರೆ?!

ಕಣ್ಣು ಚುಚ್ಚಿ ಕಣ್ಣೆದುರು
ಕನ್ನಡಿ ಹಿಡಿಯೋ ವ್ಯಂಗ್ಯನಾ
ಏನು ಹೇಳಲಿ? ಹೇಗೆ ತಾಳಲಿ?

ಬೆಟ್ಟ ಹತ್ತೋ ಆಸೇನ
ಕೊಟ್ಟು ಮುರಿದ ಪ್ರಾಣಾನ
ಅವನ ಜೂಜಲಿ ನಾವೇಲ್ಲ ಬಲಿ!

ಪ್ರತಿ ಸ್ವಾತಿ ಮಳೆ ಹನಿಯು ಮುತ್ತು ಆಗಬೇಕು
ಮನುಜತ್ವ ಮೆರೆಯುವ ಕಾಲ ಬರಲೇಬೇಕು
ಸಮಪಾಲಿನ ಜೀವನ ಬೇಕು ಈದಿನ

ಧ್ರುವತಾರೆ! ಧ್ರುವತಾರೆ!
ಕಾಲದ ಚಕ್ರದ ಅಡಿಯಲಿ
ಸಿಗುತಾರೆ
ಸಿಗುತಾರೆ
ಯಾತಕೋ ಕಾಣೆ ಈ ಉಡುಗೊರೆ?!

ಚಂದ್ರ ಬೀದಿ ಹುಡುಗಾನೆ
ಸತ್ತು ಮತ್ತೆ ಹುಟ್ಟುತಾನೆ
ಕೋಟಿ ತಾರೆಗಳು ಮೌನ ಪ್ರೇಕ್ಷಕ

ಬೆಳೆಯೋ ಪೈರು ಮೊಳಕೇಲಿ
ಚಿವುಟೋರಿಲ್ಲಿ ಮಾಮೂಲಿ
ಬ್ರಹ್ಮ ಗೀಚಿದ ಇಂಥ ಜಾತಕ

ಇಡೀ ಭೂಮಿ ಎತ್ತುವ ಶಕ್ತಿ ಇರುವ ಧೀರಾ
ಹಸಿವಿಂದ ಸತ್ತರೆ ಕನಸು ಹೆಣದ ಭಾರ
ಇದು ಶಾಪವೋ? ಲೋಪವೋ?
ಯಾರ ಪಾಪವೋ?

ಧ್ರುವತಾರೆ! (ಧ್ರುವತಾರೆ)
ಧ್ರುವತಾರೆ! (ಧ್ರುವತಾರೆ)
ಕಾಲದ ಚಕ್ರದ ಅಡಿಯಲಿ
ಸಿಗುತಾರೆ (ಸಿಗುತಾರೆ)
ಸಿಗುತಾರೆ (ಸಿಗುತಾರೆ)
ಯಾತಕೋ ಕಾಣೆ ಈ ಉಡುಗೊರೆ?!



Credits
Writer(s): Arjun Janya, V. Nagendra Prasad
Lyrics powered by www.musixmatch.com

Link