Raajakumara

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಜಿಸೋ ರಾಜರತ್ನನು
ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದು ಸೋಲದು ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ

ಗುಡಿಸಲೇ ಆಗಲಿ ಅರಮನೆ ಆಗಲಿ ಆಟವೇ ನಿಲ್ಲದು
ಎಂದೂ ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೇ ಬರಲಿ ಬೇಧವೆ ತೋರದು
ಎಂದೂ ಬೇಧ ತೋರದು
ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯ್ಯಿ ನಿನದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ
ನಿನ್ನನು ಪಡೆದ ನಾವು ಪುನೀತ ಬಾಳು ನಗು ನಗುತ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೇ ಉಳಿವುದು ಕೊನೆಗೆ
ಸೂರ್ಯನೊಬ್ಬ, ಚಂದ್ರನೊಬ್ಬ ರಾಜನೂ ಒಬ್ಬ
ಈ ರಾಜನು ಒಬ್ಬ
ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದು ಸೋಲದು ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ



Credits
Writer(s): V Harikrishna
Lyrics powered by www.musixmatch.com

Link