Saagarada

ಸಾಗರದ ಅಲೆಗೂ ದಣಿವು
ಪರ್ವತಕೂ ಬೀಳೋ ಭಯವು
ಮಳೆಯ ಹನಿಗೂ ಬಂತು ನೋಡು ದಾಹ
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ
ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು
ನಿಂತಿದೆ ಮಂಕಾಗಿ ಸುಮ್ಮನೆ
ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ

ಸಾಗರದ ಅಲೆಗೂ ದಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ನಗುವು

ಬೇಸರದ ರಾಟೆಯು ಎದೆಯಲಿ ತಿರುಗಿ
ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ
ಬದುಕಿನ ಹೊಸ ರೂಪದ ಪರಿಚಯವಾಗಿ
ಬೆಳೆಕೆ ಕಳೆದ್ಹೋಗಿದೆ ಸೋಲಲಿ ಮುಳುಗಿ
ಎಲ್ಲೇ ನೋಡು ಹಳೇ ಗುರುತು
ಬಾಳೋದ್ಹೇಗೆ ಎಲ್ಲಾ ಮರೆತು
ಬಯಸದೆ ನಾ ಎಲ್ಲಾ ಅಂದು
ಬಯಸಿದರೂ ಇಲ್ಲ ಇಂದು
ಈಜುವುದೇಗೆ ಕುದಿಯೋ ನದಿಯನ್ನ
ಚೂಪಾದ ಕಲ್ಲಿಂದ ಚೂರಾಯ್ತು
ಕನಸಿನ ದರ್ಪಣ
ಸಾಗರದ ಅಲೆಗೂ ದಣಿವು

ಕಾಲ ನೀನು ಮಾಯಾ
ಇಲ್ಲಾ ನಿನಗೆ ನ್ಯಾಯಾ
ವಾಸಿ ಮಾಡೋರ್ಯಾರು
ಒಳಗೆ ಆದ ಗಾಯ
ನಂಜು ಒಂದು ಹೃದಯ ಸವರಿ
ಮಂಜು ಕವಿದು ಮಬ್ಬು ದಾರಿ
ಗೆದ್ದಾಗ ಬೆನ್ನು ತಟ್ಟಿ
ಬಿದ್ದಾಗ ಮೇಲೆ ಎತ್ತಿ
ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ
ಆಸೆಗಳ ಆಕಾಶ ಪಾತಾಳ ಮುಟ್ಟಿದೆ ಈ ದಿನ

ಸಾಗರದ ಅಲೆಗೂ ದಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ನಗುವು



Credits
Writer(s): Ghouse Peer, V. Harikrishna
Lyrics powered by www.musixmatch.com

Link