Olave Mounave (From "Ganga Yamuna")

ಒಲವೇ
ಮೌನವೇ
ಮೌನವೇ
ಗಾನವೇ
ಮನಸು
ನಾಚಿದೆ
ಮಾತು ಬಾರದೆ ಪ್ರಿಯ

ಒಲವೇ ಮೌನವೇ
ಮೌನವೇ ಗಾನವೇ

ಪ್ರಣಯ ರಾಗದಲಿ ಹೃದಯ ವೀಣೆ ಮಿಡಿದೆ
ನನ್ನ ದೇಹದಲಿ ಪ್ರಾಣವಾಗಿ ನಲಿದೆ
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಜಗವಾ ಮರೆತೆ
ನಿನ್ನಾ ಬೆರೆತೆ
ಹೊಸದೊಂದು ಲೋಕ ನೋಡಿದೆ

ಒಲವೇ ಮೌನವೇ
ಮೌನವೇ ಗಾನವೇ

ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೆ
ಬಾಳ ಪುಸ್ತಕದಿ ಪ್ರೇಮ ಕಥೆಯ ಬರೆದೆ
ತಂದೆ ಹೊಸ ರೋಮಾಂಚನ
ಜೇನ ಸವಿ ಈ ಚುಂಬನ
ತಂದೆ ಹೊಸ ರೋಮಾಂಚನ
ಜೇನ ಸವಿ ಈ ಚುಂಬನ
ಉಸಿರೇ ಉಸಿರೇ
ಬಾಳ ಹಸಿರೇ
ಅದೋ ನೋಡು ಚಂದ್ರ ಜಾರಿದೆ

ಒಲವೇ ಮೌನವೇ
ಮೌನವೇ ಗಾನವೇ
ಮನಸು ನಾಚಿದೆ
ಮಾತು ಬಾರದೆ ಪ್ರಿಯ
ಒಲವೇ
ಮೌನವೇ
ಮೌನವೇ
ಗಾನವೇ



Credits
Writer(s): R.n. Jaygopal, Vidyasagar
Lyrics powered by www.musixmatch.com

Link