Belli Rathadali Surya Thanda (From "Indrajith")

ಬೆಳ್ಳಿರಥದಲಿ ಸೂರ್ಯ ತಂದ ಕಿರಣ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ
ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ
ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಮೇಘ ಶಾಮನ ಮುರುಳಿಲೋಲನ ಪ್ರೀತಿ ಒಂದು ಕವನ
ನುಡಿಸು ಕೊಳಲನು ನಾ ಬರುವೆ ಹಿಡಿದು ಶೃತಿಯನ್ನ
ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ
ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲ್ಲೇ ಮನೆಯಾ ಕಟ್ಟುವೆನು
ಮುಗಿಲ ಮಿಂಚನೇ ತಂದಿರಿಸಿ ದೀಪಾ ಹಚ್ಚುವೆನು
ಕರಗಿದೆ ನಿನ್ನ ಒಲವಿಗೆ ಹೂ ಹಾಸುವೇ ನಿನ್ನ ಹಾದಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ
ಬಾನಂಚಿನ ಹೊಸ ಗಾನ

ಹಗಲು ಇರುಳಲಿ ಬಿಸಿಲು ಮಳೆಯಲಿ ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ
ಭೂಮಿ ಬೀರಿದರೂ ಪ್ರಳಯವಾದರೂ ಇರಲಿ ಎಂದೂ ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ ಕಾಣಲು ಬಲು ಚೆನ್ನ
ಅರಳಿದೆ ಹೂ ಮಲ್ಲಿಗೆ ಉಸಿರಾಡಿದೆ ನಿನಗಾಗಿಯೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ
ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ



Credits
Writer(s): Hamsalekha
Lyrics powered by www.musixmatch.com

Link