Shuruvaagidhe

ಮಾತಿನ ಈಟಿಯ ಬೀಸಿ
ಲಾಟೀನು ಕಣ್ಣಲ್ಲೇ ಉರಿಸಿ
ಬೇಟೆಗೆ ಬಂದಳು ರೂಪಸಿ
ಈಕೆಯ ಕೈಯಿಂದ ಉಳಿಸಿ
ಕುಂಚವೇ ಸೋಲುವ ಚೆಂದ (ಚೆಂದ)
ಕೊಂಚವು ಮೀರದ ಅಂದ (ಅಂದ)
ಸಂಪಿಗೆ ತೀಡಿದ ಗಂಧ
ಮೇನಕೆ ಹೆತ್ತಿರೋ ಕಂದ
ಒಲವಿನ ಅಲೆಗಳು ಎದೆಯ ಮೀಟಿ
ಹುಡುಗನ ಮನಸೇ ಲೂಟಿ
ಶುರುವಾಗಿದೆ ಸಿಹಿ ಕಂಪನ
ನರನಾಡಿಲೂ ನಿನ್ನ ರಿಂಗಣ

ಮಾತಲ್ಲಿ ಸಕ್ಕರೆ ಪಾಕ
ಕೇಳುತ ಜೀವವೇ ಮೂಕ
ನಗುವಲಿ ಮೋಹಕ ಶಾಖ
ದಾಟಿಸಿ ಸೆಳೆದಳು ಲೋಕ
ಒಳಬೇಗುದಿ ನಿನದೇ ಸಖಿ
ತುಸು ಕೂತು ಕೇಳು ನೀ ಗೋಳು
ಮನದಾಹಕೆ ಹೊಸ ಶಾಯರಿ
ಪಿಸು ಮಾತು ಮಾತಲೇ ಹೇಳು
ನಡೆದಳು ಅಪ್ಸರೆ ಒಲವ ಗೀಚಿ
ಹುಡುಗನ ಮನಸು ದೋಚಿ
ಶಿಲಾಬಾಲಿಕೆ ಉಸಿರಾಡಿದೆ
ಎದೆಯ ಮಾಳಿಗೆ ಅಲುಗಾಡಿದೆ

ಎದೆಗೂಡಲಿ ನಿನದೇ ದನಿ
ಗುನುಗುತ್ತಾ ಪ್ರೀತಿಯ ಹಾಡು
ನಡೆದಾಡುವ ಚೆಲುವ ಗಣಿ
ದಯಮಾಡಿ ಈಕಡೆ ನೋಡು
ಕಚಗುಳಿ ಇಡುತಿದೆ ಗೆಜ್ಜೆ ಘಲ್ಲು
ಹರಡಿದೆ ಒಲವಾ ಗುಲ್ಲು

ಶುರುವಾಗಿದೆ ಸಿಹಿ ಕಂಪನ
ನರನಾಡಿಲೂ ನಿನ್ನ ರಿಂಗಣ



Credits
Writer(s): Arjun Luis, Judah Sandhy
Lyrics powered by www.musixmatch.com

Link