Cheluve Neenu Nakkare (From "Neenu Nakkare Haalu Sakkare")

ಚೆಲುವೆ ನೀನು ನಕ್ಕರೆ
ಬದುಕು ಹಾಲು ಸಕ್ಕರೆ
ಚೆಲುವ ನಿನ್ನ ಅಕ್ಕರೆ
ನನ್ನ ಬಾಳ ಸಕ್ಕರೆ
ನಿನ್ನ ಬಿಟ್ಟಿರಲಾರೆನು
ನಿನ್ನ ಬಿಟ್ಟಿರಲಾರೆನು
I love you ಪ್ರತಿ ಕ್ಷಣವೂ, ಪ್ರತಿ ದಿನವೂ, ಪ್ರತಿ ಜನುಮದಲೂ

ಚೆಲುವೆ ನೀನು ನಕ್ಕರೆ
ಬದುಕು ಹಾಲು ಸಕ್ಕರೆ

ಮನಸಿನ ಒಳಗೆ ಮನೆಯನು ಮಾಡಿ ಇರಿಸುವೆನು, ಓ ನಲ್ಲೇ
ಗುಡಿಸಲೇ ಇರಲಿ ಅರಮನೆ ಇರಲಿ
ಅನುದಿನವೂ ನಗುತಿರುವೆ
ಸಿರಿತನವಿರಲಿ, ಬಡತನವಿರಲಿ, ನೆರಳಾಗಿ ನಾನಿರುವೆ
ಒಲವಿನ ಗೀತೆ ಹಾಡುತಲಿರುವೆ
ಸಡಗರದಿ ನಾ ಬೆರೆವೆ
ಹೀಗೆ ನಲಿಯುವೆ
ನಿನ್ನ ನಲಿಸುವೆ
ನನ್ನಿನಿಯ
ನನ್ನಿನಿಯ

ಚೆಲುವೆ ನೀನು ನಕ್ಕರೆ
ಬದುಕು ಹಾಲು ಸಕ್ಕರೆ

ಬದುಕಿನ ಸ್ವರಕೆ ಶ್ರುತಿಯನು ಬೆರೆಸಿ ಹೊಸರಾಗ ನಾ ತರುವೆ
ನನ್ನೆದೆ ತಾಳ ಹಾಕುತಲಿರಲು ನಾನಾಗ ಮೈಮರೆವೆ
ಬೆರೆತರೆ ಮನಸು ಬದುಕಿನ ಕನಸು
ನನಸಾಗಿ ಸೊಗಸಾಗಿ
ಬಲು ಹಿತವಾಗಿ, ಸವಿಜೇನಾಗಿ
ಬಾಳೊಂದು ಹೂವಾಗಿ
ಎಂಥ ಪಾವನ
ನಮ್ಮ ಜೀವನ
ನನ್ನಿನಿಯ
ನನ್ನಿನಿಯ

ಚೆಲುವೆ ನೀನು ನಕ್ಕರೆ
ಬದುಕು ಹಾಲು ಸಕ್ಕರೆ
ಚೆಲುವ ನಿನ್ನ ಅಕ್ಕರೆ
ನನ್ನ ಬಾಳ ಸಕ್ಕರೆ
ನಿನ್ನ ಬಿಟ್ಟಿರಲಾರೆನು
ನಿನ್ನ ಬಿಟ್ಟಿರಲಾರೆನು
I love you ಪ್ರತಿ ಕ್ಷಣವೂ, ಪ್ರತಿ ದಿನವೂ, ಪ್ರತಿ ಜನುಮದಲೂ



Credits
Writer(s): Hamsalekha
Lyrics powered by www.musixmatch.com

Link