Dehavendare O Manuja

ದೇಹವೆಂದರೆ ಓ ಮನುಜ
ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ
ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ
ಈಶ್ವರನೇ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಖವು ಶಾಶ್ವತ

ದೇಹವೆಂದರೆ ಓ ಮನುಜ
ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ
ಮೋಹದಿಂದ ದುಃಖವು ಸಹಜ

ಕಟ್ಟಿರುವ ಗುಡಿಯಲ್ಲಿ ಉಟ್ಟಿರುವ ಮಡಿಯಲ್ಲಿ
ಸುಟ್ಟ ಧೂಪ ದೀಪದಿ ಶಿವನಿಲ್ಲ

ಬಗೆ ಬಗೆ ಮಂತ್ರದಲ್ಲಿ ಯಾಗ ಯಜ್ಞಗಳಲ್ಲಿ
ಜಪ ತಪ ವ್ರತದಲ್ಲಿ ಅವನಿಲ್ಲ
ಮಣ್ಣ ಕಣ ಕಣದಲ್ಲು ಜೀವ ಜೀವಗಳಲ್ಲು
ಒಳಗಿನ ಕಣ್ಣಿಗೆ ಕಾಣುವಾತನು

ದೇಹವೆಂದರೆ ಓ ಮನುಜ
ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ
ಮೋಹದಿಂದ ದುಃಖವು ಸಹಜ

ಮೇಲು ಕೀಳಿನ ನಡತೆ ಹಾದಿ ತಪ್ಪಿದ ಜಡತೆ
ಕುಲ ವ್ಯಾಕುಲಗಳು ಸರಿಯೇನು

ರೋಷ ದ್ವೇಷದ ಉರಿಯು
ಲೋಭ ಮೋಸದ ಪರಿಯು
ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸನ್ಮತಿ ಹುಡುಕು
ಸತ್ಯದ ಪಥವೇ ಬೆಳ್ಳಿ ಬೆಳಕು
ಕರುಣೆ ಪ್ರೇಮವೇ ಉಲ್ಲಾಸ
ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ
ನೀತಿ ಮಾರ್ಗವೇ ಭವನಾಶ
ವೈಭೋಗ ಜೀವನ ತ್ಯಾಗವ ಮಾಡಿ
ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ



Credits
Writer(s): V. Manohar
Lyrics powered by www.musixmatch.com

Link