Kolumande Jangama

ಹೇ ಮಾತ್ಮಲ್ಲಯ್ಯ (ಹೇ ಮಾತ್ಮಲ್ಲಯ್ಯ)

ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ
ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ
(ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ)

ಕೊಡುವಾಗ್ಲೆಲ್ಲ ಕೊಡ್ತಾನೊ ನಮ್ಮಪ್ಪ ಶಿವ
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವ
ಅಕ್ಕರೆ ಮಾತಾಯಿ ಭಿಕ್ಷೆ ಆಕವ್ವ ಅಂದೌವ್ನೆ ಮಾದೇವ
ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ
(ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ)

ತಾಯಿ ಅಂದ್ರೆ ತಾಯಿ ಆಗ್ಬೇಕಿಲ್ಲ ತಾಯಿ
ಲಗ್ನ ಆಗ್ದೇ ಇರೋ ಹೆಣ್ಮಗಳು ತಾಯಿ
ಭಿಕ್ಷೆ ನೀಡುದ್ರೆ ಬಾಳು ಬಂಗಾರ ತಾಯಿ
ಬೈದ್ ದೂಡುದ್ರೆ ಬಾಳು ಬೂದ್ಗುಂಬಳಕಾಯಿ ಅಂದೌನೆ ಮಾದೇವಾ
ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ
(ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ)

ಉಡ್ಗಿ ಅಂದ್ರೆ ಚಿಕ್ಕ್ ಉಡ್ಗಿ ಅಲ್ಲ ತಾಯಿ
ಕಂಕಣ ಭಾಗ್ಯ ಬರೋ ಕನ್ಯಾಮಣಿ ತಾಯಿ
ಭಿಕ್ಷೆ ನೀಡುದ್ರೆ ಸಿರಿ ಸಿಂಗಾರ ತಾಯಿ
ಬೈದ್ ದೂಡುದ್ರೆ ನಿಮ್ ಬಾಳು ಬೆಂಡೇಕಾಯಿ ಅಂದೌವ್ನೆ ಮಾದೇವಾ

ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ
(ಕ್ವೋರಣ್ಯ ನೀಡವ್ವ ಕೋರುಗಲ್ಲಮ್ಮದೇವನಿಗೆ)

ಶುಭವಾಗುತೈತಮ್ಮೋ
ಶುಭವಾಗುತೈತಮ್ಮೋ
ಹೆತ್ತೌವ್ರ ಪುಣ್ಯವು ಗುಟ್ಟಾಗಿ ಬಂತಮ್ಮೋ
ಮುತ್ತಂಥ ಭಾಗ್ಯವ ಬಾಗಿಲಿಗೆ ತಂತಮ್ಮೋ
ದೇವರ ಗುಡ್ಡ ಬಂದು ಭಕ್ತಿಇಂದ ಶಿವನ ನೆನೆದು ಹಾಡಿ
ಭೂದೇವಿ ಕೈಯ ಚಾಚಿ ಆಕಾಶಾನ ಮುಟ್ಟೋತಾವು ನೋಡಿ
(ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ)

ಬನವೆಲ್ಲ ಹೂವಾದೋ
ಹೂವೆಲ್ಲ ಗಮ್ಮೆಂದೋ
ಕೈ ಎತ್ತಿ ಕ್ವಾರುಣ್ಯ ಭಿಕ್ಷೆಯ ನೀಡೌವ್ವೋ
ಮಾದೇವ್ನ ಮನಸಾರೆ ರಕ್ಷೆಯ ಕೇಳವ್ವೋ
ನೆತ್ತಿಯ ಸೂರ್ಯ ಸ್ವಾಮಿ ಕತ್ಲೆ ಮನಗೆ ಓಗೊ ಒತ್ತು ಆಡು
ಚಿತ್ತಾವ ಗಟ್ಟಿ ಮಾಡಿ ಇತ್ಲಾಗಿ ಕುಳಿತ್ರೆ ಮುತ್ತು ನೋಡೋ

(ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ)

ಕಾದೋರ್ಗೆ ಕಾಣ್ತಾನೋ
ಕಂಡೋರ್ಗೆ ನೀಡ್ತಾನೋ
ಮುಂಗಾರ ಮಳೆಬರಲು ಸೋಗೆಯು ಕುಣಿದಾವೋ
ಬಾಯಾರಿ ನೆಲದೊಡಲ ಕಣಕಣವು ಮಣಿದಾವೋ
ಕೋಡ್ಗಲ್ಲ ಗುಡ್ಡೆ ಮ್ಯಾಗೆ ಮಾದೇವ ಬಂದೆ ಬರುತಾನವ್ವೋ
ನಂಬಿದ ಭಕ್ತರಿಗೆಂದು ಪ್ರೀತಿಯ ಕೊಟ್ಟೆ ಕೊಡುತಾನಮ್ಮೊ

(ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ)



Credits
Writer(s): V. Manohar
Lyrics powered by www.musixmatch.com

Link