Tunthuru Tunthuru

ತುಂತುರು ತುಂತುರು ನಿನ್ನದೇ ತುಂತುರು
ಕುಂತರೂ ನಾ ನಿಂತರೂ ನೀನೆ ದಿಲ್ರುಬಾ
ತುಂತುರು ತುಂತುರು ನಿನ್ನದೇ ತುಂತುರು
ಕುಂತರೂ ನಾ ನಿಂತರೂ ನೀನೆ ದಿಲ್ರುಬಾ
ಉಸಿರಾಟ ಕೂಡ bore-ಆಗಿದೆ
ತಂಗಾಳಿ ಈಗ ಜೋರಾಗಿದೆ
ಕನಸೆಲ್ಲ ನುಚ್ಚು ನೂರಾಗಿದೆ
ಕೇಳೇ ದಿಲ್ರುಬಾ

ಎಲೇಲೊ ಏನೀ ಹುಡುಗಿ ನನ್ನೊಳಗಡೆ ಕುಂತವ್ಳೋ
ಎಲೇಲೊ ಏನೀ ಹುಡುಗಿ ಯಾಕ್ ಹಿಂಗೇ ಆಡ್ತಾವ್ಳೋ
ಎಲೇಲೊ ಏನ್ ಈ ಹುಡುಗಿ ಪ್ರೀತೀನೇ ಮರ್ತವ್ಳೋ
ಎಲೇಲೊ ಏನ್ ಈ ಹುಡುಗಿ ನನ್ನ್ಬಿಟ್ಟು ಹೋಗ್ತವ್ಳೋ

ತುಂತುರು ತುಂತುರು ನಿನ್ನದೇ ತುಂತುರು
ಕುಂತರೂ ನಾ ನಿಂತರೂ ನೀನೆ ದಿಲ್ರುಬಾ

ಮನೆಯಲ್ಲಿ ತಿರುಗಿ ತಿರುಗಿ
ನಿನ್ನ ನೆನದು ಕೊರಗಿ ಕೊರಗಿ
ಹಳೇ ಹಾಡು ಕೇಳೋ ಹಾಗಿದೆ
ತಲೆದಿಂಬಿನಲ್ಲೂ ನಿನ್ನ ಸೀಗೆಕಾಯಿ ವಾಸನೆ ಅಂಟಿ
ಪ್ರತಿ ರಾತ್ರಿ ನನ್ನ ಕಾಡಿದೆ
ನೀನೇ ಇರದ ದಿನವೆಲ್ಲಾ ಖಾಲಿ ಖಾಲಿ
ಎಲ್ಲಾ ಹೊಸದು ಅನಿಸುತ್ತೆ ಮಾಮೂಲಿ
ಜ್ವರಬಂದ ಹಾಗೆ ಮನಸಾಗಿದೆ
ಜೊತೆಗಿದ್ದ ದಿನವು ನೆನಪಾಗಿದೆ
ನೀ ಬೇಕು ಎಂದು ಹಠಮಾಡಿದೆ
ಬಾರೆ ದಿಲ್ರುಬಾ

ಎಲೇಲೊ ಏನ್ ಈ ಹುಡುಗಿ ಪ್ರೀತೀನೇ ಮರ್ತವ್ಳೋ
ಎಲೇಲೊ ಏನ್ ಈ ಹುಡುಗಿ ನನ್ನ್ಬಿಟ್ಟು ಹೋಗ್ತವ್ಳೋ

ನೀನಾಡೋ ಮಾತುಗಳೆಲ್ಲ ಪದೇ ಪದೇ ಎದಿರುಗೆ ಬಂದು
ನಿನ್ನ ಹಾಗೆ ಮಾತಾಡಿದೆ
ನೀನು ಇಲ್ಲಿ ಬಂದಾ ಹಾಗೆ
ಖುಷಿ ಮತ್ತೆ ತಂದಾ ಹಾಗೆ
ಕನಸೊಂದು ಬೀಳಬಾರದೇ
ನಿದಿರೆ ಬಾರದ ಈ ಕಂಗಳ ಒಮ್ಮೆ ನೋಡು
ಎಲ್ಲಾ
(ಎಲ್ಲಾ)
ಇದ್ದು
(ಇದ್ದು)
ಇರದಂತೆ ನನ್ನ ಪಾಡು
ಜೊತೆಯಲ್ಲಿ ಯಾರೋ ಇದ್ದಂಗಿದೆ
ನನ್ನ ಕೈಯ್ಯ ಹಿಡಿದು ನಡೆದಂತಿದೆ
ಅದು ನೀನೇ ಎಂದು ಗೊತ್ತಾಗಿದೆ
ನಿಜ ಹೇಳೇ ದಿಲ್ರುಬಾ

ಎಲೇಲೊ ಏನ್ ಈ ಹುಡುಗಿ ನನ್ನೊಳಗಡೆ ಕುಂತವ್ಳೋ
ಎಲೇಲೊ ಏನ್ ಈ ಹುಡುಗಿ ಯಾಕ್ ಹಿಂಗೇ ಆಡ್ತಾವ್ಳೋ
ಎಲೇಲೊ ಏನ್ ಈ ಹುಡುಗಿ ಪ್ರೀತೀನೇ ಮರ್ತವ್ಳೋ
ಎಲೇಲೊ ಏನ್ ಈ ಹುಡುಗಿ ನನ್ನ್ಬಿಟ್ಟು ಹೋಗ್ತವ್ಳೋ



Credits
Writer(s): S A Lokesh Kumar, Santhu
Lyrics powered by www.musixmatch.com

Link