Nodutha Nodutha

ನೋಡುತಾ ನೋಡುತಾ ನಿನ್ನನೇ ನೋಡುತಾ
ಹಾಡುತಾ ಹಾಡುತಾ ಸುಮ್ಮನೇ ಹಾಡುತಾ
ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ
ಕಾಡತಾ ಕಾಡುತಾ ಸವಿಯಾಗಿ ಕಾಡುತಾ
ಹೀಗೇ ಕಳೆಯಲಿ ಒಂದಿನ
ಹೀಗೇ ಕಳೆಯಲಿ ಜೀವನ

ನೋಡುತಾ ನೋಡುತಾ ನಿನ್ನನೇ ನೋಡುತಾ
ಹಾಡುತಾ ಹಾಡುತಾ ಸುಮ್ಮನೇ ಹಾಡುತಾ

ಸಾವಿರ ಸ್ವರಗಳ ನುಡಿಸುವೆ ಒಮ್ಮೆಲೇ
ಸದ್ದನು ಮಾಡದೇ ನೀ ಕೇಳು ಒಮ್ಮೆ
ತುಂಟ ವಯಸ್ಸು ನಿನ್ನಲ್ಲಿ ಏನೋ ಹುಡುಕುವಾಗ
ಆ ಕಡೆ ನೀ ನೋಡದೇ ಸುಮ್ಮನೇ ಇರಬಾರದೇ
ಕಣ್ಣಿನಲ್ಲಿ ಧೂಳಂತ ನಾನು ನಟಿಸುವಾಗ
ಸೋಕಿಸಿ ನಿನ್ನುಸಿರನು ಸಾಯಿಸು ತುಸು ನನ್ನನು
ಕಂಗಳಾ ಸಮರವೋ
ಉಸಿರಿನಾ ಶಾಕವೋ
ಒಲವಿನಾ ರಾಗವೋ
ಅರಿಯದಾ ಪುಳಕವೋ
ಹೀಗೇ ಕಳೆಯಲಿ ಒಂದಿನ
ಹೀಗೇ ಕಳೆಯಲಿ ಜೀವನ

ಜನಿಸುವ ಮುನ್ನವೇ ಹೃದಯವೂ ನಿನ್ನನೇ
ಹುಡುಕಿದ ಕಥೆಯನೂ ನಾ ಹೇಳಲೇನು
ಮಾತು ಸಾಕು ಅಂದಾಗ ಒಂದು ಸಣ್ಣ ಜಗಳ
ಸುಮ್ಮನೇ ಆರಂಭಿಸು
ಆದರೇ ಬೇಗ ಮುಗಿಸು
ಕಳ್ಳ ನಿದ್ದೆ ಬಂದಾಗ ನಿನ್ನ ಮಡಿಲಾ ಮೇಲೆ
ಹಾಯಾಗಿ ನಾ ಮಲಗಲೇ
ಹಾಗೇನೆ ಕನಸಾಗಲೇ
ಸುಮ್ಮನೇ ಕುಂತರೂ
ನಿನ್ನದೇ ತುಂತುರು
ತೀರದೆ ಎಂದಿಗೂ
ಪ್ರೀತಿಯ ಮಂಪರು
ಹೀಗೇ ಕಳೆಯಲಿ ಒಂದಿನ
ಹೀಗೇ ಕಳೆಯಲಿ ಜೀವನ

ನೋಡುತಾ ನೋಡುತಾ ನಿನ್ನನೇ ನೋಡುತಾ
ಹಾಡುತಾ ಹಾಡುತಾ ಸುಮ್ಮನೇ ಹಾಡುತಾ
ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ
ಕಾಡುತಾ ಕಾಡುತಾ ಸವಿಯಾಗಿ ಕಾಡುತಾ
ಹೀಗೇ ಕಳೆಯಲಿ ಒಂದಿನ
ಹೀಗೇ ಕಳೆಯಲಿ ಜೀವನ



Credits
Writer(s): V Harikrishna
Lyrics powered by www.musixmatch.com

Link