Sullu Sullu

ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು

(ಚಿಕ್ಕೋರೆ, ದೊಡ್ಡೋರು ಹೇಳಿದ್ ದಿಟವೇ)

ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು
ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು
ನಾನು ಸುಳ್ಳು, ನೀನು ಸುಳ್ಳು
ಅವನು ಸುಳ್ಳು, ಇವನು ಸುಳ್ಳು
ನಾನು ಸುಳ್ಳು, ನೀನು ಸುಳ್ಳು
ಅವನು ಸುಳ್ಳು, ಇವನು ಸುಳ್ಳು
ಬ್ರಹ್ಮ ಗೀಚಿದ ಹಣೆಬರ ಸುಳ್ಳು
ಸೃಷ್ಟಿಕರ್ತ ಅವ ಮೊದಲೇ ಸುಳ್ಳು

ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು

ರಾಮ ಹನುಮ ಸುಳ್ಳು
ಸೀತಾ ಮಾತಾ ಸುಳ್ಳು
ರಾವಣ ಕದ್ದಿದ್ದು ಸುಳ್ಳು
ಲಂಕಾ ಸುಟ್ಟಿದ್ದು ಸುಳ್ಳು

ಹೇ, ನಿನ್ನ ನಿಜವೇ ಒಂದು ಸುಳ್ಳು
ನೀ ಬಯಸೋದೆಲ್ಲ ಸುಳ್ಳು
ನೀ ಬದುಕೋ ರೀತಿ ಸುಳ್ಳು
ಸುಳ್ಳನ್ನೂರೆಲ್ಲ ಸುಳ್ಳು

ಹೆಣ್ಣು ಮಣ್ಣಿಗೆ ಯುದ್ಧ ಮಾಡಿದ ಕುರುಕ್ಷೇತ್ರ ಸುಳ್ಳು
ನಿನ್ನೆ ನಾಳೆಯ ನಂಬಿ ಬಾಳದ ಭಂಡ ನೀನು ಸುಳ್ಳು
ನೀ ಸುಳ್ಳು
ನೀ ಸುಳ್ಳು
ನೀ ಸುಳ್ಳು, ಸುಳ್ಳು, ಸುಳ್ಳು, ಸುಳ್ಳು

ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು

ಹರಿಶ್ಚಂದ್ರನು ಸುಳ್ಳು
ಅವ ಸತ್ಯ ಹೇಳಿದ್ದು ಸುಳ್ಳು
(ಹರಿಶ್ಚಂದ್ರನು ಸುಳ್ಳು
ಅವ ಸತ್ಯ ಹೇಳಿದ್ದು ಸುಳ್ಳು)
ಹುಟ್ಟು ಸಾವಲ್ಲಿ, ನಿತ್ಯ ಬದುಕಲ್ಲಿ ಸತ್ಯ ಹೇಳೋರು ಸುಳ್ಳು

(ಸುಳ್ಳೇ ಸುಳ್ಳು
ಸುಳ್ಳೇ ಸುಳ್ಳು
ಸುಳ್ಳೇ ಸುಳ್ಳು
ಸುಳ್ಳೇ ಸುಳ್ಳು)

(ತಂದಾನಿ ನಾನಾ
ತಂದಾನಿ ನಾನಾ
ತಾನಾನಿ ತಂದಾನನ
ತಾನಾನಿ ನಾನಾ
ತಂದಾನಿ ನಾನಾ
ತಾನಾನಿ ತಂದಾನಿನಾ)

ಪ್ರೀತಿ ಇರೋದೆ ಸುಳ್ಳು
ಪ್ರೀತಿ ಸಿಕ್ಕೋದೆ ಸುಳ್ಳು
ಪ್ರೀತಿ ಮಾಡೋರು ಸುಳ್ಳು
ನಂಬಿ ಕಾಯೋರು ಸುಳ್ಳು

ನೀ ಆಡೋ ಮಾತು ಸುಳ್ಳು
ನೀ ನಡೆಯೋ ದಾರಿ ಸುಳ್ಳು
ನೀ ನೋಡೋ ನೋಟ ಸುಳ್ಳು
ನೀ ನಂಬೋದೆಲ್ಲಾ ಸುಳ್ಳು

ಪ್ರೀತಿ ಮಾತನು ನಂಬಿ ಬದುಕುವ ಮೂರ್ಖರೆಲ್ಲ ಸುಳ್ಳು
ತಿನ್ನೋ ಅನ್ನವ ಮಣ್ಣು ಅನ್ನುವ ಮನುಜರೆಲ್ಲ ಸುಳ್ಳ

ನೀ ಸುಳ್ಳು
ನೀ ಸುಳ್ಳು
ನೀ ಸುಳ್ಳು, ಸುಳ್ಳು, ಸುಳ್ಳು, ಸುಳ್ಳು

ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು
ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು
ನಾನು ಸುಳ್ಳು, ನೀನು ಸುಳ್ಳು
ಅವನು ಸುಳ್ಳು, ಇವನು ಸುಳ್ಳು
ನಾನು ಸುಳ್ಳು, ನೀನು ಸುಳ್ಳು
ಅವನು ಸುಳ್ಳು, ಇವನು ಸುಳ್ಳು
ಬ್ರಹ್ಮ ಗೀಚಿದ ಹಣೆಬರ ಸುಳ್ಳು
ಸೃಷ್ಟಿಕರ್ತ ಅವ ಮೊದಲೇ ಸುಳ್ಳು

ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು
(ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ ಎಲ್ಲಾ ಸುಳ್ಳು)



Credits
Writer(s): R.p. Patnayak, Prem
Lyrics powered by www.musixmatch.com

Link