Kadalanthe

ಕಡಲಂತೆ ಕಾದ ಕಣ್ಣು
ನದಿಯಂತೆ ಓಡುವ ಕನಸು

ಕಡಲಂತೆ ಕಾದ ಕಣ್ಣು
ನದಿಯಂತೆ ಓಡುವ ಕನಸು
ಒಂದಾಗಿ ಒಲಿದ ಮೇಲೆ
ಒಂದಾಗಿ ಒಲಿದ ಮೇಲೆ
ತೀರ ಸೇರೋ ಪ್ರಾಯ

(ವಿರಹದ ಅಂತಿಮ
ಹೃದಯಕೆ ಸಂಭ್ರಮ
ಅಧರದ ಅಂಚಿಗೆ
ಮಧುರದ ಕೋರಿಕೆ)

ನಿನ್ನ ಮೇಲಿನಾಸೆ ಎಂದು ಕೊನೆಯಾಗದೆ
ಕೊಂಚ ದೂರ ಆದ್ರೂ ಮನಸು ಅಳುತಲಿದೆ
ಅಪ್ಪಿಕೊಳ್ಳ ಬೇಕು ಅನ್ನೊಕಲ್ಪನೆಗೆ
ಕೈಯ ಚಾಚಿ ನಿಲ್ಲು ಜನುಮ ಸಾಕೆನೆಗೆ
ನೂರಾರು ಕಾಲಕೂ (ನೂರಾರು ಕಾಲಕೂ)
ನೀ ನನ್ನ ಸ್ವಂತವೆ (ಸ್ವಂತವೆ)
ಅತಿಯಾದ ಪ್ರೀತಿಗೆ
ಇದೆ ನನ್ನ ಸ್ಥಿತಿ ಗತಿ

(ವಿರಹದ ಅಂತಿಮ
ಹೃದಯಕೆ ಸಂಭ್ರಮ
ಅಧರದ ಅಂಚಿಗೆ
ಮಧುರದ ಕೋರಿಕೆ)

ಕಡಲಂತೆ ಕಾದ ಕಣ್ಣು (ಕಡಲಂತೆ ಕಾದ ಕಣ್ಣು)
ನದಿಯಂತೆ ಓಡುವ ಕನಸು (ನದಿಯಂತೆ)
ಕಡಲಂತೆ ಕಾದ ಕಣ್ಣು (ಕಡಲಂತೆ ಕಾದ ಕಣ್ಣು)
ನದಿಯಂತೆ ಓಡುವ ಕನಸು (ನದಿಯಂತೆ ಓಡುವ)

ನನ್ನ ಕಣ್ಣಾ ಕನಸುಗಳು
ನಿನ್ನ ರೂಪ ಬಿಡಿಸುತಿದೆ
ನನ್ನ ಬಾಳ ಬಣ್ಣಿಸು ಬಾ
ಪ್ರೇಯಸಿ (ಪ್ರೇಯಸಿ)

ತುಂಟತನ ಕೆನ್ನೆ ಮೇಲೆ ಮುತ್ತನಿಟ್ಟಂತೆ
ಮನಸಿನಾಸೆಗೆಲ್ಲ ಪ್ರೀತಿ ಸಾಲ ಕೊಟ್ಟಂತೆ
ಹೇಗೊ ನಿನ್ನ ಸೇರಿಕೊಳ್ಳೊ ಆಸೆ ನನ್ನದು
ಅಂತ ಸುಖ ಸಂತಸದ ಸೆಳೆತ ನಿನ್ನದು

ನನದೆಲ್ಲ ನಿನ್ನದೆ
ನಿನ್ನ ಬಿಟ್ಟು ಏನಿದೆ
ಸಿಹಿಯಾದ ಯಾತನೆ
ಇದಕಿಲ್ಲ ಇತಿ ಮಿತಿ



Credits
Writer(s): Dhananjay Ranjan, Justin Prabhakaran
Lyrics powered by www.musixmatch.com

Link