Gira Gira Gira

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಂಗದಿಲ್ಲವೇ
(ಹೊಯ್ ಹೊಯ್ ಹೊಯ್ ಹೊಯ್)

ಅಲೆದಾಡುತ ಅವಳೆದುರಲ್ಲೇ
ದಣಿದು ಮಣಿದು ಹೋದರೂ
ಮನಸೇ ಕರಗುತ್ತಿಲ್ಲವೇ
(ಹೊಯ್ ಹೊಯ್ ಹೊಯ್ ಹೊಯ್)

(ಅವಳಂತೂ ತಿರುಗಿ ನೋಡೋಲ್ಲ
ಪ್ರೀತಿಯ ಗಮನ ಇಲ್ಲ
ಹೊಯ್)

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಂಗದಿಲ್ಲವೇ
(ಹೊಯ್ ಹೊಯ್ ಹೊಯ್ ಹೊಯ್)

ಅಲೆದಾಡುತ ಅವಳೆದುರಲ್ಲೇ
ದಣಿದು ಮಣಿದು ಹೋದರೂ
ಮನಸೇ ಕರಗುತ್ತಿಲ್ಲವೇ
(ಹೊಯ್ ಹೊಯ್
ಹೊಯ್
ಹೊಯ್ ಹೊಯ್
ಹೊಯ್)

ಅಲೆಯೋ ಅಲೆಗೆ ಬೇಸರವಿರದು
ಕನಸು ಸಿಲುಕಿ ಚಿಂತೆಯಪಡದು
ನಿಜದ ಗುಣಕೆ ಅಂಜಿಕೆ ಇರದು
ಏನೇ ಆದರೂ

ಮನಸಿಗಿದುವೇ ಸ್ವಂತದ ವಿಷಯ
ಗಮನ ಕೊಡುತಾ ಗೆಲ್ಲುವ ಸಮಯ
ಗಗನ ಬಾಗಿ ನಿಂತಿರ ಬಹುದು
ಕೆಳಗೆ ಬೀಳದು

ಕಾದಾಗ ತಾನೇ ಸುಡೋ ತಾಪ
ನೀರಾವಿಯಾಗಿ
ಆಕಾಶ ತಾಕಿ ಬರುವಾಗ
ಮಳೆತಾನೆ

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಂಗದಿಲ್ಲವೇ

(ಸಂಗೀತ ಡೋಲು ಹಾಡು ಗಟ್ಟಿಮೇಳ
ಗಂಡಿನ ಕಳ್ಳ ನೋಟ ಕಂಡೆವೇಲ್ಲ
ಬಂಗಾರದ್ ಹೆಣ್ಣೇ ಕಣ್ಣು ಎತ್ತಿ ನೋಡೇ
ನಿನ್ ಕೈ ಹಿಡಿಯೋ ಗಂಡಂತೂ ರಾಜ ಕಣೇ)

ಯಾರಿಗ್ಯಾರು ತಿಳಿಯದ ಶುರುವು
ಅದನು ಕೇಳಿ ಪ್ರೀತಿಯು ಬರಡು
ಒಬ್ಬರನೊಬ್ಬರು ಅದೇ ಸೇರಿಸಿದೆ
ಮನಸಾ ಒಡೆವುದೇ

ಎದುರು ಬರಲು ಕ್ಷಣದಲೇ ತಿರುವು
ಜೊತೆಗೆ ಇರಲು ಖಂಡಿತಾ ಗೆಲುವು
ದಿಕ್ಕು ಎರಡು ಬೇರೆಯೇ ಇನ್ನು
ಪಯಣ ಮುಂದಿದೆ

ನಾನಿನ್ನು ನೀನೇ
ನೀನು ನಾನೆ ನಾವೊಂದೇತಾನೆ
ದೂರಾದರೇನು ಬಳಿಬಂದು ಸೇರ್ತಿನೇ

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಂಗದಿಲ್ಲವೇ
(ಹೊಯ್ ಹೊಯ್ ಹೊಯ್ ಹೊಯ್)

ಅಲೆದಾಡುತ ಅವಳೆದುರಲ್ಲೇ
ದಣಿದು ಮಣಿದು ಹೋದರೂ
ಮನಸೇ ಕರಗುತಿಲ್ಲವೇ



Credits
Writer(s): Karthik Netha, Justin Prabhakaran
Lyrics powered by www.musixmatch.com

Link