Thala Aakiro

ತಾಳ ಆಕಿರೋ ಹೊಸ ಹಾಡನು ಹಾಡುವ ಬನ್ನಿರೋ
ಮೇಳ ಊದಿರೋ ಇಲ್ಲೆಲ್ಲವು ಖುಷಿ ಕುಣಿದಾಡಿರೋ

ಮಾಮ ನೋಡಿರೋ ಕಥೆ ಮತ್ತೆ ಮೊದಲಿಂದ ಶುರು
ಬೇಗ ಬನ್ನಿರೋ ಡೋಲ್ ಹೊಡೆದು ಹೆಜ್ಜೆ ಹಾಕಿರೋ
ಗಡಿಯಾರ ನೋಡೋಂಗಿಲ್ಲ
ನಮ್ಮ ನೆನಪೆಲ್ಲಾ ಮರಳಿಬಂತಲ್ಲಾ
ಸಡಗಾರ ಸಂಭ್ರಮಕೆ
ನಮ್ ಹುಲಿವೇಷ ಹಾಕ ಬನ್ನಿರೋ

ನಮ್ ಸ್ನೇಹದಿ ದೂರವೇ (ಇಷ್ಟು ಕಾಲ)
ನಾವ್ ಬೆರೆತರೆ ಸಂಗಮ (ನಗುವ ಮೇಳ)
ಸಿಹಿಯಾ ನೆನಪು ಗುಂಡಿಗೆ ತಾಕಿತೇ
ಹೇ ಸಿಹಿಯಾ... ನೆನಪು
ಗುಂಡಿಗೆ... ತಾಕಿತೆ
ತತ್ ತಾಕಿತೆ ತತ್ ತಾಕಿತೆ ತತ ತತ ತಕಿತೆ

ಅರೇ ಉಲ್ಲಾಸದ ಎಲ್ಲೇ ಮೀರಿ
ಆನಂದದಿ ತೇಲುವಾಗ
ಮನಸಿನಾಟ ಎಂಥ ಚೆಂದನೋ
ಆ ಸಂತೋಷದಿ ಹೃದಯ ಅರಳಿತೋ
ಬಲು ಎತ್ತರಕೆ ಹೋಗಿ ನಿಂತ ಬಂಧನವು
ನಮ್ಮನ್ನೆಲ್ಲಾ ಬಂಧಿಸಿದೆ ಎಂಥ ಅಂದವೋ
ಆ ಬಂಧನದಲ್ಲಿ ಎಂಥ ಬಲವುಂಟೋ



Credits
Writer(s): Dhananjay Ranjan, Justin Prabhakaran
Lyrics powered by www.musixmatch.com

Link