Gungalle

ನಿನ್ನ ಗುಂಗಲ್ಲೇ
ಕಳೆದ್ಹೋದೆ ಕ್ಷಣದಲೇ
ಕನಸೀಗ ಶುರುವಾಗಿದೆ
ನಿನ್ನ ಕಣ್ಣಲ್ಲೇ
ಬರೆಯುತ ಹಾಜರಿ
ಮನಸೀಗ ಕವಿಯಾಗಿದೆ

ಸುಳಿವಿಲ್ಲದೇನೇ ಶುರುವಾಗುವ
ಮಳೆಯಂತೆಯೇ ಎಂದು ನೀನು
ಬಳಿ ನಿಲ್ಲದೇನೇ ಮರೆಯಾಗುವ
ಅಲೆಯಂತೆಯೇ ನಿನ್ನ ಇರುವು

ನಿನ್ನ ಗುಂಗಲ್ಲೇ
ಕಳೆದ್ಹೋದೆ ಕ್ಷಣದಲೇ
ಕನಸೀಗ ಶುರುವಾಗಿದೆ

ಏನೋ ಅಚ್ಚರಿ
ಮಿಂಚೊಂದು ನನ್ನಲಿ
ಅರಿವಿಲ್ಲದೆ ಸುಳಿದಾಡಿದೆ
ಏನೋ ಸಂಚಲಿ
ಗೊತ್ತಿರದೆ ನಿನ್ನಲಿ
ಮನಸೀಗೀಗ ಸೆರೆಯಾಗಿದೆ

ನಿನ್ನ ಮಾತಲ್ಲೇ
ಹೊಸದೊಂದು ದಿನಚರಿ
ದಿನವೀಗ ಬದಲಾಗಿದೆ
ನಿನ್ನ ಗುಂಗಲ್ಲೇ
ಕಳೆದ್ಹೋದೆ ಕ್ಷಣದಲೇ
ಕನಸೀಗ ಶುರುವಾಗಿದೆ



Credits
Lyrics powered by www.musixmatch.com

Link