Bere Naanu

ನದಿಯ ನೀರು ಮರಳಿ ಹರಿದರೆ
ಆ ನಕ್ಷತ್ರವು ಕೈಗೆ ಸಿಕ್ಕರೆ
ಇರುವ ಎಲ್ಲವು ಇರುವಂತೆ ಯಾಕಿದೆ?
ಉತ್ತರಗಳಿಗೆ ಪ್ರಶ್ನೆ ಯಾಕಿದೆ?

ಓ, ಹೊ, ಹೊ, ಹೋ
ಓ, ಹೊ, ಹೊ, ಹೋ

ಒಂದು ನಿಮಿಷ ಸಮಯ ನಿಂತರೆ
ಆ ನಿಮಿಷವೂ ಕಳೆದು ಹೋದರೆ
ಇರುವ ಎಲ್ಲವು ಇರುವಂತೆ ಯಾಕಿದೆ?
ಕಳೆದ ಕ್ಷಣವನು ಪಡೆದದ್ದು ಎಂದಿದೆ

ಓ, ಹೊ, ಹೊ, ಹೋ
ಓ, ಹೊ, ಹೊ, ಹೋ

ಒಪ್ಪುವ ಕಣ್ಣಿಗೆ, ಒಪ್ಪದ ಮನಸಿಗೆ
ಎದುರಾಗಿ ನಿಂತ ಬೇರೆ ನಾನು

ಉಸಿರೇ ಒಂದು ಹಾಳೆಯಾದರೆ
ಆ ಹಾಳೆಯೂ ಖಾಲಿಯಾಗದೆ
ಇರುವ ಎಲ್ಲವು ಇರುವಂತೆ ಯಾಕಿದೆ?
ಅಂತ್ಯದಾಚೆಯ ಒಗಟು ಉಳಿದಿದೆ

ಓ, ಹೊ, ಹೊ, ಹೋ
ಓ, ಹೊ, ಹೊ, ಹೋ

ಮನಸೇ ಒಂದು ಯಾನವಾದರೆ
ಆ ಮರೀಚಿಕೆ ನನ್ನಲ್ಲೆ ಇದೆ
ಇರುವ ಎಲ್ಲವು ಇರುವಂತೆ ಯಾಕಿದೆ?
ಈ ಕುತೂಹಲಕ್ಕೆ ಕೊನೆಯು ಎಲ್ಲಿದೆ?

ಓ, ಹೊ, ಹೊ, ಹೋ
ಓ, ಹೊ, ಹೊ, ಹೋ

ಇರುವುದನ್ನು ಒಪ್ಪುವ, ಒಪ್ಪದೇನೆ ಕೇಳುವ
ಎದುರಾಗಿ ನಿಂತ ಬೇರೆ ನಾನು



Credits
Lyrics powered by www.musixmatch.com

Link