Modala Sethuve

ಹುಡುಕಾಟ ಮುಗಿಯದ ಈ
ಹುಡುಕಾಟ ನಿನ್ನೊಳಗಿನ ಈ

ನಿನ್ನಲ್ಲಿರೋ ನಿನ್ನನೇ ಮರೆತಂತಿದೆ
ಮುಗಿಯದಿರೋ ಮುಗಿಲನ್ನು ಬೆನ್ಹತ್ತಿದೆ

ಕುತೂಹಲ ಕೋಲಾಹಲ
ಬೆರೆತು ಕಟ್ಟಿದೆ
ಅಸ್ತಿತ್ವದ ಅಸ್ತಿತ್ವಕೆ
ಮೊದಲ ಸೇತುವೆ

ಹುಡುಕಾಟ ನಿಲುಕದ ಈ
ಹುಡುಕಾಟ ನಿನ್ನೆದುರಿನ ಈ

ಪರಿಚಯವೇ ಇಲ್ಲದ ಪರಿಚಯಕೆ
ಅಪರಿಚಿತ ದಾರಿಯ ಚಡಪಡಿಕೆ

ನಿಶ್ಯಬ್ಧವು ನಿಶ್ಯಬ್ಧವಾ
ತೊರೆದು ಕಟ್ಟಿದೆ
ಅಸ್ತಿತ್ವದ ಅಸ್ತಿತ್ವಕೆ
ಮೊದಲ ಸೇತುವೆ



Credits
Lyrics powered by www.musixmatch.com

Link